भारतीय भाषाओं द्वारा ज्ञान

Knowledge through Indian Languages

Dictionary

Kumbarike Vrutti Padakosha (Tulu-Kannada)(KASAPA)

Kannada Sahitya Parishattu (KASAPA)

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

ಕಪ್ಟಲ್

(ನಾ)
ದನಗಳಿಗೆ ಅಕ್ಕಚ್ಚು ಹಾಕಿಡುವ ದೊಡ್ಡ ಮಣ್ಣಿನ ಪಾತ್ರೆ ಬಾನಿ, ಭತ್ತಿದಿಂದ ಅಕ್ಕಿ ತೆಗೆಯುವ ಪ್ರಕ್ರಿಯೆಯ ಮೊದಲ ಹಂತದಲ್ಲಿ ಭತ್ತವನ್ನು ನೆನೆಹಾಕಲು ಬಳಸುವ ದೊಡ್ಡ ಪಾತ್ರೆ. A broad mouthed vessel. A big earthen vessel to store drinking water for cattle.

ಕಾರ್ ದ ಕಡ್ಯ

(ನಾ)
ಇದು ಸಾಮಾನ್ಯವಾಗಿ ಕೊಡಪಾನದಂತಿದ್ದು ಅಡಿಭಾಗದಲ್ಲಿ ಮಣ್ಣಿನ ಪಟ್ಟಿ ಇರುತ್ತದೆ. ಇದನ್ನು ಮನೆಯಲ್ಲಿ ನೀರು ತುಂಬಿಡಲು ಬಳಸುತ್ತಾರೆ. ಇದರಲ್ಲಿ ಹಾಕಿಟ್ಟ ನೀರು ತಣ್ಣಗಿರುವದರಿಂದ ಸೆಕೆಗಾಲದಲ್ಲಿ ಇದರ ಬಳಕೆ ಅಧಿಕ.

ಕಿನ್ನಿ ಬಿಸಲೆ

(ನಾ)
ತಿಂಡಿ ತಿನಿಸುಗಳಿಗೆ ಒಗ್ಗರಣೆ ಹಾಕಲು ಅಲ್ಪ-ಸ್ವಲ್ಪ ತರಕಾರಿ ಪಲ್ಯ ತಯಾರಿಸಲು ಬಳಸುತ್ತಿದ್ದ ಚಿಕ್ಕ ಪಾತ್ರೆ.

ಕುಜಿಲ್

(ನಾ)
ಇದು ವಿಶೇಷವಾಗಿ ತಾಳೆಯ ಮರದಿಂದ ಕಳ್ಳು ತೆಗೆಯಲು ಉಪಯೋಗಿಸುವ ಪಾತ್ರೆ. ಇದು ದುಂಡಗಿದ್ದು ಸಾಗಾಟಕ್ಕೆ ಅನುಕೂಲವಾಗಿರುತ್ತದೆ.

ಕುದುಪೆ

(ನಾ)
ಹಾಲು ಬಿಸಿ ಮಾಡಲು ಬಳಸುತ್ತಿದ್ದ ಸಣ್ಣ ಗಾತ್ರದ ಮಣ್ಣಿನ ಪಾತ್ರೆ. ಹಾಲಿನ ಚಟಿಗಿ, ಮೊಸರಿನಿಂದ ಬೆಣ್ಣೆ ತೆಗೆಯಲು ಇದನ್ನೇ ಬಳಸುತ್ತಿದ್ದರು.

ಕೋರಯಿ

(ನಾ)
ಇದು ಅಗಲವಾದ ಕಡಿಮೆ ಆಳದ ಪಾತ್ರೆ, ಅಕ್ಕಿಯನ್ನು ತೊಳೆಯಲು ಮತ್ತು ಅಕ್ಕಿಯಲ್ಲಿ ಬೆರೆತಿರುವ ಕಲ್ಲು, ಹೊಯ್ಗೆಯನ್ನು ಬೇರ್ಪಡಿಸಲು ಬಳಸುವ ಪಾತ್ರೆ.

ಗಟ್ಟಣೆ

(ನಾ)
ಹಸಿಮಡಕೆಯನ್ನು ಕಲ್ಲು, ಸೊಳದಿಂದ ತಟ್ಟುವುದು.

ಗುಂಡಿ ಬಿಸಲೆ

(ನಾ)
ಸಾರು, ತೋವೆ ಮತ್ತು ತರಕಾರಿ ಪಲ್ಯ ತಯಾರಿಸಲು ಉಪಯೋಗಿಸುವ ಪಾತ್ರೆ, ಆಳವಾಗಿರುತ್ತದೆ.

ಚಟ್ಟಿ

(ನಾ)
ಹೂಕುಂಡ, ಹೂದಾನಿ, ಕನ್ನಡದಲ್ಲಿ ಕೊಡ ಚಟ್ಟಿ ಎನ್ನುವ ಪದ ಬಳಕೆಯಲ್ಲಿದೆ. ಮನೆಯ ಹಾಗೂ ಕಟ್ಟಡಗಳ ಹೊರ ಅಲಂಕರಣಕ್ಕಾಗಿ ಹೂಗಿಡಗಳನ್ನು ನೆಡುವ ಪಾತ್ರೆ.

ಗುರ್ಕೆ

(ನಾ)
ಗುಡಾಣ, ಹರಿವೆ, ಪಡಗ

ತಗೋರಿ

(ನಾ)
ತಿಗುರಿ, ಕುಂಬಾರನ ಚಕ್ರ, ವಿದ್ಯುತ್ ಚಾಲಿತ ಚಕ್ರಗಳು ಬಂದಿವೆ. ಮರದ ಮತ್ತು ಮಣ್ಣಿನ ತಿಗುರಿಯ ಬಳಕೆ ಈಗಲೂ ಇದೆ.

ತಟ್ಟಿ ಬಿಸಲೆ

(ನಾ)
ಇದು ಗಾತ್ರದಲ್ಲಿ ಚಿಕ್ಕದಾಗಿದ್ದು ಅಗಲವಾದ ಬಾಯಿಯನ್ನು ಹೊಂದಿರುತ್ತದೆ.ಮೀನು ಮಾಂಸದ ಅಡುಗೆ ಪಾತ್ರೆಯಾಗಿ ವಿಶೇಷವಾಗಿ ಉಪಯೋಗಿಸುವರು.

ತಂದೂರ್ ರೊಟ್ಟಿ

(ನಾ)
ಇದು ತುಳುವಿಗೆ ಬೇರೆ ಭಾಷೆಯಿಂದ ಬಂದದ್ದು, ತಂದೂರಿ

ಗೂಡು

(ನಾ)
ರೋಟ್ಟಿಯನ್ನು ತಯಾರಿಸುವ ಮಣ್ಣಿನ ಒಲೆ “ತಂದೂರಿ ಒಲೆ” ಎಂದೇ ಕನ್ನಡದಲ್ಲಿ ಬಳಕೆಯಲ್ಲಿದೆ. ತಂದೂರಿ ಒಲೆ ತಯಾರಿಸುವಾಗ ಮಣ್ಣಿಗೆ ಕುಪ್ಪಿಚೂರು ಮತ್ತು ಮರಳನ್ನು ಹೆಚ್ಚಾಗಿ ಬೆರೆಸುವರು.

ತಿಬಿಲೆ

(ನಾ)
ಹಣತೆ, ಪ್ರಣತಿ, ದೀಪಾವಳಿ, ಹಾಗೂ ಕಾರ್ತೀಕ ಮಾಸದಲ್ಲಿ ದೀಪ ಹಚ್ಚಲು ಪ್ರಣತಿಯನ್ನು ಹೆಚ್ಚಾಗಿ ಬಳಸುವರು.

ತೂರಿ

(ನಾ)
ಇದು ದೇವಸ್ಥಾನಗಳಲ್ಲಿ ಪೂಜಾವಿಧಿಗಳಿಗೆ ಬಳಸುವ ಕಲಶ ಶವ ಸಂಸ್ಕಾರದ ಸಮಯದಲ್ಲಿ ಶ್ರೀಮಂತರಿಂದ ಬಡವರವರೆಗೆ ಉಪಯೋಗಿಸುವ ಮಣ್ಣಿನ ಮಡಕೆ ಎಂದರೆ “ತೂರಿ” ಇದನ್ನು ಮುಗಯಿ ಎಂದು ಕರೆಯುವರುಂಟು.

ನಡಾರೆ

(ನಾ)
ಇದು ಮಣ್ಣಿನ ಒಲೆ ಹಿಂಬದಿ ಮುಚ್ಚಿದ್ದು ಎದುರುಗಡೆ ಉರುವಲಿಗಾಗಿ ಬಾಯಿ ಇರುತ್ತದೆ. ಬೆಂಕಿಯ ಅನುಕೂಲಕ್ಕೆ ಗಾಳಿ ಸಿಗಲು ಬದಿಗಳಲ್ಲಿ ರಂದ್ರಗಳನ್ನು ಮಾಡಿರುತ್ತಾರೆ.

ಪಲ್ಲಯಿ/ಗದ್ದವು

(ನಾ)
ಹಳೆಯ ಕಾಲದ ಊಟದ ಬಟ್ಟಲು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಾಣಂತಿಯರು ಊಟ ಮಾಡಲು ಮಣ್ಣಿನ ಬಟ್ಟಲನ್ನೇ ಉಪಯೋಗಿಸುವರು. ದೊಡ್ಡ ಗಾತ್ರದ ಬಟ್ಟಲನ್ನು ‘ಪಲ್ಲಯಿ’ ಎಂದು ಚಿಕ್ಕ ಗಾತ್ರದ ಬಟ್ಟಲನ್ನು ‘ಗದ್ದವು’ ಎನ್ನುವುದು ವಾಡಿಕೆ. ಚಿಕ್ಕಮಕ್ಕಳಿಗೆ ಗಿಡಮೂಲಿಕೆ ಮದ್ದನ್ನು ಹಾಕಿ ಅರೆದು ಕುಡಿಸಲು ಕೂಡ ಉಪಯೋಗಿಸುತ್ತಿದ್ದರು.

ತಿಪ್ಪಿ (ಗೆರಟೆ)

(ನಾ)
ಅರೆ ಒಣಗಿದ ಮಡಕೆಗಳನ್ನು ನಯಗೊಳಿಸಲು ಗೆರೆಟೆಯಿಂದ ಉಜ್ಜುವರು. ತೆಂಗಿನ ಚಿಪ್ಪನ್ನು ಇದಕ್ಕಾಗಿ ಉಪಯೋಗಿಸುವರು.

ಪುಡಯಿ

(ನಾ)
ಬಳ್ಳಿಯಿಂದ ಮಾಡಿದ ದೊಡ್ಡ ಪುಟ್ಟ ಚಿಕ್ಕ ಮಡಕೆಗಳನ್ನು ಅದರಲ್ಲಿಟ್ಟು ಕುಂಬಾರರು ಹೊತ್ತುಮಾರುವರು.

Search Dictionaries

Loading Results

Follow Us :   
  Download Bharatavani App
  Bharatavani Windows App