English-Kannada Nighantu (University of Mysore)
University of Mysore
A, a
ಪದಗುಚ್ಛ
ನುಡಿಗಟ್ಟು
(ಬಹುವಚನ As, A’s, Aes).
- ಇಂಗ್ಲಿಷ್ ವರ್ಣಮಾಲೆಯ ಅಕ್ಷರ.
- (ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
- ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
- (ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
- (ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.
a, an
ಗುಣವಾಚಕ
(ಅನಿರ್ದೇಶವಾಚಕ)
- ಒಂದು; ಒಬ್ಬ; ಯಾವುದಾದರೂ.
- ಒಂದಾನೊಂದು; ಒಬ್ಬಾನೊಬ್ಬ: once upon a time there lived a king ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ದೊರೆ ಇದ್ದ.
- ಅಂಥ; ಅವನಂಥ; ಅದರಂಥ; ಆ ತರಹದ: a Daniel ಒಬ್ಬ ಡೇನಿಯಲ್; ಡೇನಿಯಲ್ನಂಥವನು.
- ಒಂದೇ ಒಂದು; ಒಂದು ಸಹ: could not see a thing ಒಂದೇ ಒಂದು ವಸ್ತುವನ್ನೂ ನೋಡಲಾಗಲಿಲ್ಲ. to reduce unemployment at a stroke ಒಂದೇ ಏಟಿನಲ್ಲಿ ನಿರುದ್ಯೋಗವನ್ನು ತಗ್ಗಿಸಲು.
- ಜಾತ್ಯೇಕವಚನವನ್ನು ಸೂಚಿಸುವಾಗ: a cow is an animal (= cows are animals) ಹಸು ಒಂದು ಪ್ರಾಣಿ.
- ಯಾವುದಾದರೂ ಒಂದರ ಅಂಶವನ್ನು ಸೂಚಿಸುವಾಗ: half a rupee ಅರ್ಧ ರೂಪಾಯಿ. half an hour ಅರ್ಧ ಘಂಟೆ.
- how, so, as, too ಇವುಗಳಲ್ಲಿ ಒಂದರ ಬಳಿಕ ಗುಣವಾಚಕ ಬಂದಾಗ: how good a man ಎಂಥ ಒಳ್ಳೆಯ ಮನುಷ್ಯ. so pretty a girl ಎಂಥ ಚಂದದ ಹುಡುಗಿ. as efficient a secretary as you desire ನೀವು ಬಯಸುವಷ್ಟು ದಕ್ಷನಾದ ಕಾರ್ಯದರ್ಶಿ. it is too difficult a task ಅದು ಅತಿ ಕಷ್ಟದ ಕೆಲಸ.
- ಒಂದೇ ತರಹದ, ಮಟ್ಟದ: all of a size ಎಲ್ಲ ಒಂದೇ ಗಾತ್ರದ.
- ಪ್ರತಿಯೊಂದಕ್ಕೂ; ಪ್ರತಿಯೊಂದರಲ್ಲಿಯೂ: at three miles an hour ಗಂಟೆಗೆ ಮೂರು ಮೈಲಿಗಳಂತೆ. Rs.40 a year ವರ್ಷಕ್ಕೆ ೪೦ ರೂ.ಗಳು twice a day ದಿನಕ್ಕೆ ಯಾ ದಿನದಲ್ಲಿ ಎರಡು ಬಾರಿ.
- ಯಾರೋ ಒಬ್ಬರು: a Mr. Brown ಯಾರೋ ಒಬ್ಬ ಬ್ರೌನ್.
a
ಉಪಸರ್ಗ
(ಸಾಮಾನ್ಯವಾಗಿ ಪೂರ್ವಪ್ರತ್ಯಯವಾಗಿ)
- ಮೇಲೆ. abed ಹಾಸಿಗೆಯ ಮೇಲೆ. afire ಉರಿ ಹತ್ತಿ. afoot ಕಾಲಮೇಲೆ; ನಡೆದುಕೊಂಡು.
- -ಕ್ಕೆ: ashore ದಡಕ್ಕೆ
- -ಅಲ್ಲಿ: nowadays ಇಂದು; ಈಚಿನ ದಿನಗಳಲ್ಲಿ
- -ಕಡೆಗೆ; -ಅತ್ತ: aback ಹಿಂದುಗಡೆಗೆ. aside ಪಕ್ಕಕ್ಕೆ; ಪಕ್ಕದ ಕಡೆಗೆ.
- ಆ ಸ್ಥಿತಿಯಲ್ಲಿ: asleep ನಿದ್ದೆಯಲ್ಲಿ. alive ಬದುಕಿರುವ. a-blaze ಉರಿಯುತ್ತ, ಧಗಧಗಿಸುತ್ತ. a-float ತೇಲುತ್ತ. abuzz ಮೊರೆಯುತ್ತ. aflutter ರಪರಪನೆ ಬಡಿಯತ್ತ.
- -ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.
a-
ಪೂರ್ವಪ್ರತ್ಯಯ
- ಒತ್ತಿ ಹೇಳುವಾಗ; ಅತಿಶಯಾರ್ಥಕ: arise ಎದ್ದೇಳು.
- ನಿಷೇಧಾರ್ಥಕ; ಅಭಾವ ಸೂಚಕ: atheist ನಾಸ್ತಿಕ.
- ಬೇರೆ ಕಡೆಗೆ: avert ಬೇರೆ ಕಡೆಗೆ ತಿರುಗಿಸು; ತಪ್ಪಿಸು.
-a
ಉತ್ತರಪ್ರತ್ಯಯ
- ಸ್ತ್ರೀವಾಚಕ: donna (ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಲ್ಲಿ) ಮಹಿಳೆ.
- (ಜೀವವಿಜ್ಞಾನ) ಕೆಲವು ನಾಮವಾಚಕಗಳಲ್ಲಿ: hyena, dahlia.
- ಭೌಗೋಳಿಕ ನಾಮವಾಚಕಗಳಲ್ಲಿ: Africa.
- ನಪುಂಸಕ ಬಹುವಚನ ಸೂಚಕ: data, phenomena.
- (ರಸಾಯನವಿಜ್ಞಾನ) ಕೆಲವು ಆಕ್ಸೈಡುಗಳಲ್ಲಿ: alumina
- (ಪ್ರಾಣಿವಿಜ್ಞಾನ) ಕೆಲವು ವರ್ಗಗಳ ಹೆಸರುಗಳಲ್ಲಿ: Carnivora.
- ಪ್ರಾಚೀನ ಯಾ ಲ್ಯಾಟಿನ್ ಭಾಷೆಯನ್ನು ಅನುಕರಿಸಿದ ಆಧುನಿಕ ಸ್ತ್ರೀನಾಮಗಳಲ್ಲಿ: Lydia, Hilda.
- (ಆಡುಮಾತು ಯಾ ಅಶಿಷ್ಟ) of ಎನ್ನುವುದಕ್ಕೆ ಬದಲಾಗಿ: kinda, pinta.
- (ಆಡುಮಾತು ಯಾ ಅಶಿಷ್ಟ) have ಎಂಬುದಕ್ಕೆ ಬದಲಾಗಿ: mighta.
A
ಸಂಕ್ಷಿಪ್ತ
- (ಬ್ರಿಟಿಷ್ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
- ampere(s).
- angstrom(s).
- answer.
- Associate of.
- atomic (energy ಮೊದಲಾದವು).
a.
ಸಂಕ್ಷಿಪ್ತ
atto-.
AA
ಸಂಕ್ಷಿಪ್ತ
- (ಅಮೆರಿಕನ್ ಪ್ರಯೋಗ) Alcoholics Anonymous.
- anti-aircraft.
- (ಬ್ರಿಟಿಷ್ ಪ್ರಯೋಗ) Automobile Association.
- (ಬ್ರಿಟಿಷ್ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) 14 ವರ್ಷ ಮೀರಿದವರು ಮಾತ್ರ ನೋಡಬೇಕಾದ.
AAA
ಸಂಕ್ಷಿಪ್ತ
- (ಬ್ರಿಟಿಷ್ ಪ್ರಯೋಗ) Amateur Athletic Association.
- (ಅಮೆರಿಕನ್ ಪ್ರಯೋಗ) Automobile Association of America.
A & M
ಸಂಕ್ಷಿಪ್ತ
(Hymns) Ancient and Modern.
A & R
ಸಂಕ್ಷಿಪ್ತ
arists and recording(or repertoire).
aardvark
ನಾಮವಾಚಕ
ಆರ್ಡ್ವಾರ್ಕ್; ಆಹ್ರಿಕದ ಒಂದು ಬಗೆಯ ಗೆದ್ದಲುಬಾಕ ಸಸ್ತನಿ.
aardwolf
ನಾಮವಾಚಕ
(ಬಹುವಚನ aardwolves). ನೆಲತೋಳ; ಇಳಾವೃಕ್ಷ; ಕತ್ತೆಕಿರುಬಕ್ಕೂ ಪುನುಗು ಬೆಕ್ಕಿಗೂ ನಡುವಣ ಜಾತಿಯ, ದಕ್ಷಿಣ ಆಹ್ರಿಕದ ಮಾಂಸಾಹಾರಿ ಹಾಗೂ ಕೀಟಾಹಾರಿ ಪ್ರಾಣಿ.
Aaron’s beard
ನಾಮವಾಚಕ
(ಸಸ್ಯವಿಜ್ಞಾನ) ದಾಡಿಗಿಡ; ದೀರ್ಘ ಕೇಸರವುಳ್ಳ ಹೂ ಬಿಡುವ ಹಲವು ಬಗೆಯ ಗಿಡಗಳು.
Aaron’s rod
ನಾಮವಾಚಕ
- (ಸಸ್ಯವಿಜ್ಞಾನ) ಏರನ್’ ದಂಡ; ಹಲವು ಬಗೆಯ ನೀಳ ಹೂದಂಟುಳ್ಳ ಕಾಡುಹೊಗೆಸೊಪ್ಪು ಗಿಡದ ಜಾತಿಯ ಸಸ್ಯಗಳು.
- (ಬೈಬ್ಲ್) ಮಾಯದಂಡ: ಎದುರಾಳಿಯನ್ನು ದಂಗುಬಡಿಸುವ ಮಾಟದ ಕೋಲು.
A’asia
ಸಂಕ್ಷಿಪ್ತ
Australasia.
aasvogel
ನಾಮವಾಚಕ
ಹಪ್ಪುಕಳ; ದಕ್ಷಿಣ ಆಹ್ರಿಕದ ರಣಹದ್ದು.
AAU
ಸಂಕ್ಷಿಪ್ತ
(ಅಮೆರಿಕನ್ ಪ್ರಯೋಗ) Amateur Athletic Union.
ab-
ಪೂರ್ವಪ್ರತ್ಯಯ
-ಇಂದ ಆಚೆಗೆ:-ಇಂದ ದೂರಕ್ಕೆ(ಸಂಸ್ಕೃತದ ‘ಅಪ’,‘ಅವ’ ಎಂಬ ಪ್ರತ್ಯಗಳಂತೆ): abduct ಅಪಹರಿಸು; ಒಂದು ಸ್ಥಳದಿಂದ ದೂರಕ್ಕೆ ಹಾರಿಸಿಕೊಂಡು ಹೋಗು.
AB
ಸಂಕ್ಷಿಪ್ತ
- Able-bodied rating or seaman.
- (ಅಮೆರಿಕನ್ ಪ್ರಯೋಗ) Bachelor of Arts.